ತಲೆಬರಹಗಳು

Wednesday, July 21, 2010

ಒನ್ನೋಟ

ಮೇರುವನು ಎತ್ತರದಿ ನೋಡಿದವನೋರ್ವ ಅದ
ನೇರಿದವ ಮತ್ತೋರ್ವ ಸುತ್ತಿಸುತ್ತಿ
ಓರುವನ ನೋಟ ಮತ್ತೋರುವನಿಗಿಲ್ಲ ಅವು
ಸೇರಿದೊಡೆ ಒನ್ನೋಟ ಚಾರುವಾಕ

3 comments:

ಹಂಸಾನಂದಿ said...

ಭಲೆ ಚಾರ್ವಾಕರೆ,

ನಿಮ್ಮ ಚಾರುವಾಕ್ಕು ನಿಜದಲ್ಲೂ ’ಚಾರು’ ವಾಕ್ಕೇ, ಕರಾರುವಾಕ್ಕೇ! ಬಹಳ ಚೆನ್ನಾಗಿದೆ.

ವಿ.ಆರ್.ಭಟ್ said...

ಆಗೀಗ ಬರೆದರೆ ಆರೋಗ್ಯಕ್ಕೆ ಒಳ್ಳೆಯದು ಹೌದು ಆದರೆ ಬೇಗ ಬೇಗ ಬರೆದರೆ ಇನ್ನೂ ಒಳ್ಳೆಯದು ಎಂದು ಪ್ರಾಜ್ಞರು ಹೇಳುತ್ತಾರೆ! ಬರೆಯುತ್ತೀರಲ್ಲ, ಎಲ್ಲೋ ಒಂದು ಬಾಂಬೆಸೆದು ಸುಮ್ಮನೇ ಕೂರಬೇಡಿ, ನಿಮ್ಮಂಥವರು ಮತ್ತೆ ಬರೆದರೆ ಚೆನ್ನ ! ಹೆಸರಲ್ಲೇ ಭಾಗವತಿಕೆಯಿದೆ ಸ್ವಲ್ಪ ಭಾಗವತಿಕೆಯನ್ನೂ ಮಾಡಿ ನೋಡುವಾ ಆಗದೇ ? ಚೆನ್ನಾಗಿದೆ!

ಚಾರ್ವಾಕ ವೆಂಕಟರಮಣ ಭಾಗವತ said...

ಧನ್ಯವಾದಗಳು ಹಂಸಾನಂದಿಯವರೇ, ಆಗೀಗ ಹೊಳೆಯುವುದು ಚಕ್ಕನೆ ಹೊಳೆದು ಮರೆಯಾಗುತ್ತದೆ. ಕೆಲವನ್ನು ಹಿಡಿದಿಡುವೆ ಅಷ್ಟೇ.

ಭಟ್ಟರೇ, ಬಾಂಬೆಸೆದು ಕೂರೋ ಪಂಗಡವಲ್ಲ ನಮ್ಮದು :)
ಭಾಗವತಿಕೆ ಮಾಡಲು ಭಗವಂತನ ಕೃಪೆಯೂ ಬೇಕಲ್ಲ; ಅದು ಬಂದಾಗ ಖಂಡಿತಾ ಮಾಡುವಾ, ಆಗದೇ? ಹೀಗೇ ಬರುತ್ತಿರಿ.