ತಲೆಬರಹಗಳು

Saturday, August 28, 2010

ಅದ್ವೈತ ದರ್ಶನ

ಸ್ಪರ್ಷಗಳ ಗಂಧಗಳ ರಸ ರೂಪ ನಾದಗಳ
ಹರ್ಷ ದುಃಖಾದ್ಯಖಿಳ ಭಾವದ ಉಪಾಧಿಗಳ
ದರ್ಶನಾರೋಧಗಳ ತೊಡೆಯಲುಳಿಯುವ ನಿಜದ
ದರ್ಶನವೆ ಅದ್ವೈತ ಚಾರುವಾಕ

Friday, August 13, 2010

ಭೇದಾಭೇದ

ಭೇದವೆಂಬರು ಕೆಲರಭೇದವೆಂಬರು ಹಲರು
ಭೇದದಿನಭೇದವೆಂಬುವರಿತರರು
ಭೇದದೊಳ್ ಬಾಧಿಸುವ ವಾದದೊಳ್ ಭೇದಿಸುವ
ಭೇದಮೂರುತಿ ಯಾರೊ ಚಾರುವಾಕ

Thursday, August 12, 2010

ದ್ವೈತಭಾವ

ಎರಡಿದ್ದುದೊಂದಾಯ್ತೊ ಒಂದರಿಂದೆರಡಾಯ್ತೊ
ಎರಡ ಮಾಯೆಯ ಕಳೆಯಲುಳಿವುದೊಂದೋ
ಹೊರಟ ಬಿಂದುವ ಸುತ್ತಿ ಮತ್ತೆ ಸೇರುವ ಗೆರೆಗೆ
ಎರಡು ಬಿಂದುವೊ ಒಂದೊ ಚಾರುವಾಕ