ಬೆಳಕಿನ ಸ್ವಭಾವವೇ ಅದು, ಕ್ಷಣ ಮಿಂಚಿ ಮರೆಯಾಗುವುದು. ಆದರೆ ಆ "ಕ್ಷಣ" ಯುಗವಾಗಬಹುದು, ಅನಂತವಾಗಬಹುದು - ಅದನ್ನು ಹೊಗುವ ನಾನು ಅದೆಷ್ಟು ಕಿರಿದಾಗಬಲ್ಲೆ ಅನ್ನುವುದರ ಮೇಲೆ ಅವಲಂಬಿತ ಅದು.
Where the function of x: f(x) = L, and x & L have an inverse relationship, as x tends to zero, L tends to ∞
ಹೀಗಾಗಿ ನಾನು ಕಿರಿದಾದಂತೆಲ್ಲ, ಮಿಂಚಿ ಮರೆಯಾಗುವ ಬೆಳಕಿನ ಆ "ಕ್ಷಣ" ಹಿರಿದಾಗಬೇಕು. ನಾನು ಶೂನ್ಯವಾದರೆ ನನ್ನ ಪಾಲಿಗೆ ಬೆಳಕು ಅನಂತ; ಬಯಲು, ಮೋಕ್ಷ.
ಆಗೀಗ ಬರೆದರೆ ಆರೋಗ್ಯಕ್ಕೆ ಒಳ್ಳೆಯದು ಹೌದು ಆದರೆ ಬೇಗ ಬೇಗ ಬರೆದರೆ ಇನ್ನೂ ಒಳ್ಳೆಯದು ಎಂದು ಪ್ರಾಜ್ಞರು ಹೇಳುತ್ತಾರೆ! ಬರೆಯುತ್ತೀರಲ್ಲ, ಎಲ್ಲೋ ಒಂದು ಬಾಂಬೆಸೆದು ಸುಮ್ಮನೇ ಕೂರಬೇಡಿ, ನಿಮ್ಮಂಥವರು ಮತ್ತೆ ಬರೆದರೆ ಚೆನ್ನ ! ಹೆಸರಲ್ಲೇ ಭಾಗವತಿಕೆಯಿದೆ ಸ್ವಲ್ಪ ಭಾಗವತಿಕೆಯನ್ನೂ ಮಾಡಿ ನೋಡುವಾ ಆಗದೇ ? ಚೆನ್ನಾಗಿದೆ!
3 comments:
ಭಲೆ ಚಾರ್ವಾಕರೆ,
ನಿಮ್ಮ ಚಾರುವಾಕ್ಕು ನಿಜದಲ್ಲೂ ’ಚಾರು’ ವಾಕ್ಕೇ, ಕರಾರುವಾಕ್ಕೇ! ಬಹಳ ಚೆನ್ನಾಗಿದೆ.
ಆಗೀಗ ಬರೆದರೆ ಆರೋಗ್ಯಕ್ಕೆ ಒಳ್ಳೆಯದು ಹೌದು ಆದರೆ ಬೇಗ ಬೇಗ ಬರೆದರೆ ಇನ್ನೂ ಒಳ್ಳೆಯದು ಎಂದು ಪ್ರಾಜ್ಞರು ಹೇಳುತ್ತಾರೆ! ಬರೆಯುತ್ತೀರಲ್ಲ, ಎಲ್ಲೋ ಒಂದು ಬಾಂಬೆಸೆದು ಸುಮ್ಮನೇ ಕೂರಬೇಡಿ, ನಿಮ್ಮಂಥವರು ಮತ್ತೆ ಬರೆದರೆ ಚೆನ್ನ ! ಹೆಸರಲ್ಲೇ ಭಾಗವತಿಕೆಯಿದೆ ಸ್ವಲ್ಪ ಭಾಗವತಿಕೆಯನ್ನೂ ಮಾಡಿ ನೋಡುವಾ ಆಗದೇ ? ಚೆನ್ನಾಗಿದೆ!
ಧನ್ಯವಾದಗಳು ಹಂಸಾನಂದಿಯವರೇ, ಆಗೀಗ ಹೊಳೆಯುವುದು ಚಕ್ಕನೆ ಹೊಳೆದು ಮರೆಯಾಗುತ್ತದೆ. ಕೆಲವನ್ನು ಹಿಡಿದಿಡುವೆ ಅಷ್ಟೇ.
ಭಟ್ಟರೇ, ಬಾಂಬೆಸೆದು ಕೂರೋ ಪಂಗಡವಲ್ಲ ನಮ್ಮದು :)
ಭಾಗವತಿಕೆ ಮಾಡಲು ಭಗವಂತನ ಕೃಪೆಯೂ ಬೇಕಲ್ಲ; ಅದು ಬಂದಾಗ ಖಂಡಿತಾ ಮಾಡುವಾ, ಆಗದೇ? ಹೀಗೇ ಬರುತ್ತಿರಿ.
Post a Comment