ಪಕ್ಷಿಯುಗಳವದೊಂದು ಮರನನಾಶ್ರಯಿಸಿಹುದು
ಭಕ್ಷಿಸುವುದೊಂದು ಪಿಕ ಫಲದಿನಿಗಳ
ಈಕ್ಷಿಸುವುದಾದರದೊಳಿನ್ನೊಂದು ಕಾಣಿದುವೆ
ಲಕ್ಷ್ಯ ಜೀವಕು ಪರಕು ಚಾರುವಾಕ
ಬೆಳಕಿನ ಸ್ವಭಾವವೇ ಅದು, ಕ್ಷಣ ಮಿಂಚಿ ಮರೆಯಾಗುವುದು. ಆದರೆ ಆ "ಕ್ಷಣ" ಯುಗವಾಗಬಹುದು, ಅನಂತವಾಗಬಹುದು - ಅದನ್ನು ಹೊಗುವ ನಾನು ಅದೆಷ್ಟು ಕಿರಿದಾಗಬಲ್ಲೆ ಅನ್ನುವುದರ ಮೇಲೆ ಅವಲಂಬಿತ ಅದು. Where the function of x: f(x) = L, and x & L have an inverse relationship, as x tends to zero, L tends to ∞ ಹೀಗಾಗಿ ನಾನು ಕಿರಿದಾದಂತೆಲ್ಲ, ಮಿಂಚಿ ಮರೆಯಾಗುವ ಬೆಳಕಿನ ಆ "ಕ್ಷಣ" ಹಿರಿದಾಗಬೇಕು. ನಾನು ಶೂನ್ಯವಾದರೆ ನನ್ನ ಪಾಲಿಗೆ ಬೆಳಕು ಅನಂತ; ಬಯಲು, ಮೋಕ್ಷ.
ತಲೆಬರಹಗಳು
Thursday, November 18, 2010
Saturday, August 28, 2010
ಅದ್ವೈತ ದರ್ಶನ
ಸ್ಪರ್ಷಗಳ ಗಂಧಗಳ ರಸ ರೂಪ ನಾದಗಳ
ಹರ್ಷ ದುಃಖಾದ್ಯಖಿಳ ಭಾವದ ಉಪಾಧಿಗಳ
ದರ್ಶನಾರೋಧಗಳ ತೊಡೆಯಲುಳಿಯುವ ನಿಜದ
ದರ್ಶನವೆ ಅದ್ವೈತ ಚಾರುವಾಕ
ಹರ್ಷ ದುಃಖಾದ್ಯಖಿಳ ಭಾವದ ಉಪಾಧಿಗಳ
ದರ್ಶನಾರೋಧಗಳ ತೊಡೆಯಲುಳಿಯುವ ನಿಜದ
ದರ್ಶನವೆ ಅದ್ವೈತ ಚಾರುವಾಕ
Friday, August 13, 2010
ಭೇದಾಭೇದ
ಭೇದವೆಂಬರು ಕೆಲರಭೇದವೆಂಬರು ಹಲರು
ಭೇದದಿನಭೇದವೆಂಬುವರಿತರರು
ಭೇದದೊಳ್ ಬಾಧಿಸುವ ವಾದದೊಳ್ ಭೇದಿಸುವ
ಭೇದಮೂರುತಿ ಯಾರೊ ಚಾರುವಾಕ
ಭೇದದಿನಭೇದವೆಂಬುವರಿತರರು
ಭೇದದೊಳ್ ಬಾಧಿಸುವ ವಾದದೊಳ್ ಭೇದಿಸುವ
ಭೇದಮೂರುತಿ ಯಾರೊ ಚಾರುವಾಕ
Thursday, August 12, 2010
ದ್ವೈತಭಾವ
ಎರಡಿದ್ದುದೊಂದಾಯ್ತೊ ಒಂದರಿಂದೆರಡಾಯ್ತೊ
ಎರಡ ಮಾಯೆಯ ಕಳೆಯಲುಳಿವುದೊಂದೋ
ಹೊರಟ ಬಿಂದುವ ಸುತ್ತಿ ಮತ್ತೆ ಸೇರುವ ಗೆರೆಗೆ
ಎರಡು ಬಿಂದುವೊ ಒಂದೊ ಚಾರುವಾಕ
ಎರಡ ಮಾಯೆಯ ಕಳೆಯಲುಳಿವುದೊಂದೋ
ಹೊರಟ ಬಿಂದುವ ಸುತ್ತಿ ಮತ್ತೆ ಸೇರುವ ಗೆರೆಗೆ
ಎರಡು ಬಿಂದುವೊ ಒಂದೊ ಚಾರುವಾಕ
Wednesday, July 21, 2010
ಒನ್ನೋಟ
ಮೇರುವನು ಎತ್ತರದಿ ನೋಡಿದವನೋರ್ವ ಅದ
ನೇರಿದವ ಮತ್ತೋರ್ವ ಸುತ್ತಿಸುತ್ತಿ
ಓರುವನ ನೋಟ ಮತ್ತೋರುವನಿಗಿಲ್ಲ ಅವು
ಸೇರಿದೊಡೆ ಒನ್ನೋಟ ಚಾರುವಾಕ
ನೇರಿದವ ಮತ್ತೋರ್ವ ಸುತ್ತಿಸುತ್ತಿ
ಓರುವನ ನೋಟ ಮತ್ತೋರುವನಿಗಿಲ್ಲ ಅವು
ಸೇರಿದೊಡೆ ಒನ್ನೋಟ ಚಾರುವಾಕ
Subscribe to:
Posts (Atom)